ಏನಿದು ಡಿಸೈನ್ ಡೈನೋಸಾರ್?
ಡಿಸೈನ್ ಅನ್ನುವುದು ಒಂದು ಅಮೋಘ ಚಿಂತನೆ. ಇದು ಮುಖ್ಯವಾಹಿನಿಯಲ್ಲಿರುವ ನಂಬಿಕೆಯಂತೆ ಕೇವಲ ಬಣ್ಣದ ಜೊತೆಗಿನ ಆಟವಲ್ಲ. ನಮ್ಮ ನಿತ್ಯ ಬದುಕನ್ನು ಸುಲಭ ಮತ್ತು ಆರಾಮ ಆಗಿರುವುದು ಡಿಸೈನ್ ಇಂದ. ನಾವು ಬಳಸುವ ಪ್ರತಿಯೊಂದು ವಸ್ತು, ಸೇವೆ ಎಲ್ಲವೂ ಡಿಸೈನ್ ಚಿಂತನೆಯ ಪ್ರತಿಫಲವೇ. ಆದ್ರೆ ಭಾರತದಲ್ಲಿ ಡಿಸೈನ್ ಅನ್ನುವುದು ಇನ್ನೂ ಎಲ್ಲರಿಗೂ ತಲುಪಿಲ್ಲ. ನಮ್ಮಲ್ಲಿ ಕ್ರಿಯೇಟಿವಿಟಿ ತುಂಬಾ ಇದೆ ಆದ್ರೆ ಅದು ಡಿಸೈನ್ ಆಗಿ ಹೆಚ್ಚು ಬದಲಾಗಿಲ್ಲ. ಹಾಗಾಗಿ ಇಂದಿನ ಮಕ್ಕಳಿಗೆ ಡಿಸೈನ್ ಪರಿಚಯಿಸಿ, ಅದನ್ನು ಪೋಷಿಸಿ ಬೆಳೆಸಲು ನಿಮ್ಮ ಮುಂದೆ ಬಂದಿದೆ ಡಿಸೈನ್ ಡೈನೋಸಾರ್. ಇಲ್ಲಿ ಡಿಸೈನ್ ನ ವಿವಿಧ ಮೆಟ್ಟಿಲುಗಳನ್ನು, ಅದ್ರ ಚಿಂತನೆಗಳನ್ನು ಆನ್ಲೈನ್ ಮಾಧ್ಯಮದ ಮೂಲಕ ಪಾಠಗಳ ರೂಪದಲ್ಲಿ ನಿಮಗೆ ಪರಿಚಯಿಸಲಾಗುವುದು. ಅಗತ್ಯ ಬಿದ್ದರೆ ನೇರವಾಗಿ ಡಿಸೈನರ್ ಗಳ ಜೊತೆಗೆ ಕೂಡ ಸಂವಾದ ಮಾಡಿ ಕಲಿಸುವ ಅವಕಾಶವೂ ಇದೆ.


ಡಿಸೈನ್ ಡೈನೋಸಾರ್ ಒಂದು ಸಣ್ಣ ಪ್ರಯತ್ನ — ಮಕ್ಕಳಲ್ಲಿ ಕ್ರಿಯಾತ್ಮಕ ಚಿಂತನೆ, ಕುತೂಹಲ, ಮತ್ತು ನೋಡುವ ಕಣ್ಣನ್ನು ಬೆಳೆಸುವ ಪ್ರಯೋಗಶಾಲೆ.
ಇಲ್ಲಿ ನಾವು ಮಕ್ಕಳಿಗೆ ಡಿಸೈನ್ ಅಂದ್ರೆ ಚಿತ್ರ ಬಿಡಿಸುವುದಲ್ಲ, ಯೋಚಿಸುವ ವಿಧಾನ ಎಂದು ಹೇಳುತ್ತೇವೆ. ಅವರು ತಮ್ಮ ಸುತ್ತಲಿನ ವಸ್ತುಗಳನ್ನು ನೋಡಿ, ಪ್ರಶ್ನೆ ಮಾಡಿ, ಹೊಸ ಪರಿಹಾರ ಹುಡುಕಲು ಕಲಿಯುತ್ತಾರೆ.
ನಮ್ಮ ತರಗತಿಗಳು ಕಥೆ, ಚಿತ್ರ, ಕಾಗದ, ಪೆನ್ಸಿಲ್ ಮತ್ತು ಚಟುವಟಿಕೆಗಳ ಮೋಜಿನಿಂದ ತುಂಬಿವೆ — ಮಗು ತನ್ನ ಕಲ್ಪನೆಯನ್ನು ಸ್ವತಃ ಅನುಭವಿಸುವ ಸ್ಥಳ ಇದು.
Design Dinosaur is a creative learning space that helps children discover the joy of thinking, observing, and designing.
We believe that design is not just drawing — it’s a way of understanding the world.
Our mission is to nurture empathy, curiosity, and creativity through hands-on, story-based learning experiences.
Every class at Design Dinosaur is built like an adventure — full of stories, sketches, and small discoveries that shape a child’s creative confidence.
Join Our Community
Enter your email address to register to our newsletter subscription delivered on regular basis!
